ಅಧಿಕಾರಿಗಳ ನೀತಿ ಸಂಹಿತೆ
ನಿಗಮದ ಹಿರಿಯ ಆಡಳಿತ ವರ್ಗದ ಅಧಿಕಾರಿಗಳ ನೀತಿ ಸಂಹಿತೆ
ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಆಡಳಿತ ವರ್ಗದ ಅಧಿಕಾರಿಗಳ ನೀತಿ ಸಂಹಿತೆ :
1. ಸಂಹಿತೆಯ ಅನ್ವಯ:
- ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಹಿರಿಯ ಆಡಳಿತ ವರ್ಗ ಅಂದರೆ ನಿರ್ದೇಶಕರ ಮಂಡಳಿಯ ಮಟ್ಟದಿಂದ ಒಂದು ಮಟ್ಟದ ಕೆಳಗಿನ ಹಂತದಲ್ಲಿರುವ ಕ್ರಿಯಾತ್ಮಕ ಅಧಿಕಾರಿ ವೃಂದ ಹಾಗೂ ಎಲ್ಲಾ ಆಡಳಿತ ವರ್ಗದ ಅಧಿಕಾರಿಗಳಿಗೆ ಈ ನೀತಿ ಸಂಹಿತೆಯು ಅನ್ವಯಿಸುತ್ತದೆ. ನಿಗಮವು ತನಗೆ ಅನ್ವಯಿಸುವ ಕಾನೂನು, ನಿಯಮಗಳು ಮತ್ತು ನಿಭಂದನೆಗಳಿಗೆ ಒಳಪಟ್ಟು ಉನ್ನತ ಗುಣಮಟ್ಟದ ನೀತಿಯೊಂದಿಗೆ ವ್ಯವಹಾರವನ್ನು ನಡೆಸಲು ಬದ್ಧವಾಗಿರುವುದು. ಮಾರ್ಗದರ್ಶನ ನೀಡುವುದು, ನೈತಿಕ ವಿಷಯಗಳನ್ನು ಗುರುತಿಸಿ ಬಗೆಹರಿಸಲು ಸಹಾಯಮಾಡುವುದು, ಅನೈತಿಕ ವರ್ತನೆಯನ್ನು ವರದಿಕರಿಸುವುದು ಮತ್ತು ಸಾಂಸ್ಕøತಿಕ ಪ್ರಮಾಣಿಕತೆ ಮತ್ತು ಹೊಣೆಗಾರಿಕೆಯನ್ನು ಪೋಷಿಸುವುದು ಈ ನೀತಿ ಸಂಹಿತೆಯ ಉದ್ದೇಶವಾಗಿದೆ. ನಿಗಮದ ಪ್ರತಿಯೊಬ್ಬ ಹಿರಿಯ ಅಧಿಕಾರಿಯು ಈ ಸಂಹಿತೆಯನ್ನು ಅಕ್ಷರಸಹ ಪಾಲಿಸಲು ನಿರಿಕ್ಷೀಸಲಾಗಿದೆ. ನಿಗಮದ ಹಿರಿಯ ಅಧಿಕಾರಿಗಳು ಅನ್ವಯವಾಗುವ ಕಾನೂನುಗಳು, ನಿಯಮಗಳು ಮತ್ತು ನಿಭಂದನೆಗಳನ್ನು ಪಾಲಿಸುವುದಲ್ಲದೇ ವ್ಯವಹಾರದಲ್ಲೂ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸಬೇಕಿರುತ್ತದೆ. ಸದರಿ ಅಧಿಕಾರಿಗಳು ನಿಗಮದ ವ್ಯವಹಾರದ ಆಚರಣೆಗಳನ್ನು ನಿಯಂತ್ರಿಸುವ ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಬದ್ಧರಾಗಿರುವುದು. ಉನ್ನತ ಗುಣಮಟ್ಟದ ನೈತಿಕ ಸಂಸ್ಕøತಿಯನ್ನು ಸೃಷ್ಟಿಸಿ ನಿರ್ವಹಿಸುವುದಲ್ಲದೇ ಅನುಸರಣೆಗೆ ಬದ್ಧರಾಗಿರುವುದು ಮತ್ತು ಪಾಲುದಾರರು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಉತ್ತೇಜಿಸುವಂತಹ ಹಾಗೂ ಕೆಲಸದ ವಾತಾವರಣವನ್ನು ನಿರ್ವಹಿಸುವುದು ಸಹ ಅಧಿಕಾರಿಗಳ ಬಾಧ್ಯತೆಯಾಗಿರುತ್ತದೆ. ಈ ಸಂಹಿತೆಯು ಎದುರಾಗಬಹುದಾದ ಎಲ್ಲಾ ಸಂಭವನೀಯ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುವುದಿಲ್ಲ ಅದರೆ ಕೆಲವು ಸಾಮಾನ್ಯ ಸಮಸ್ಯೆಗಳು ಈ ಕೆಳಗಿನಂತಿವೆ:
2. ನೀತಿ ಸಂಹಿತೆಯ ಮಾರ್ಗಸೂಚಿಗಳು:
- ನಿಗಮದ ಒಬ್ಬ ಹಿರಿಯ ಅಧಿಕಾರಿಯು ಪ್ರಾಮಾಣಿಕವಾಗಿ, ನ್ಯಾಯಯುತವಾಗಿ, ನೈತಿಕವಾಗಿ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿರುತ್ತದೆ. ಆತ / ಆಕೆ ನಿಗಮಕ್ಕೆ ನಿಷ್ಠೆಯಿಂದಿರುವುದು ಮತ್ತು ಸಮಗ್ರತೆ ಮತ್ತು ಸದ್ಬಾವನೆಯಿಂದ ನಡೆದುಕೊಳ್ಳುವುದು. ನಿಗಮದ ಹಿರಿಯ ಆಡಳಿತವರ್ಗದ ಪ್ರತಿಯೊಬ್ಬ ಅಧಿಕಾರಿಯು ನಿಗಮದ ಹಿತಾಸÀಕ್ತಿಯ ದೃಷ್ಠಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರ ಬಗ್ಗೆ ಕಾಳಜಿ ತೊರುವುದು. ಆತನ / ಆಕೆಯ ಸ್ವತಂತ್ರ ನಿರ್ಣಯವು ಅಧೀನವಾಗಲು ಬಿಡದೆ ದಕ್ಷತೆ ಮತ್ತು ಕಾರ್ಯತತ್ಪರತೆಯಿಂದ ಕಾರ್ಯನಿರ್ವಹಿಸುವುದು. ನಿಗಮದ ಒಬ್ಬ ಹಿರಿಯ ಅಧಿಕಾರಿಯು ಎಲ್ಲಾ ಸಮಯದಲ್ಲೂ ಈ ಸಂಹಿತೆಯ ತತ್ವಗಳು ಮತ್ತು ನಿಯಮಗಳ ಸ್ಪೂರ್ತಿಯನ್ನು ಕಾನೂನಾತ್ಮಕವಾಗಿ ಅಕ್ಷರಸಹ ಪಾಲನೆಗೆ ಬದ್ಧವಾಗಿರುವುದು.
- ನಿಗಮದ ಹಿರಿಯ ಆಡಳಿತ ಅಧಿಕಾರಿಯು:
- ಸಭೆಗಳಿಗೆ ತಯಾರಿ ನಡೆಸುವುದು ಮತ್ತು ಸಭೆಗಳಲ್ಲಿ ಚರ್ಚಿಸಲ್ಪಡುವ ವಿಷಯಗಳನ್ನು ಮುಂಚಿತವಾಗಿ ಪರಾಮರ್ಶಿಸಿ ಸೂಕ್ತ ಸಲಹೆಗಳನ್ನು ನೀಡುವುದರ ಮೂಲಕ ನಿಗಮದ ಹಿತದೃಷ್ಠಿಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು ಸೇರಿದಂತೆ ನಿಗಮದ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸುವ ನಿಟ್ಟಿನಲ್ಲಿ ತಾನು ಸಾಕಷ್ಟು ಸಮಯ, ಗಮನ ಮತ್ತು ಶಕ್ತಿಯನ್ನು ಸಮರ್ಪಿಸುವುದು.
- ಕಾಲಕಾಲಕ್ಕೆ ಹೊರಡಿಸುವ ನಿಗಮದ ಕಾರ್ಯನೀತಿಗಳನ್ನು ಅನುಸರಿಸಲು ಕೋರುವುದು.
- ನಿಗಮದ ಷೇರುದಾರರ ವಿಶ್ವಾಸಾರ್ಹ ಬದ್ಧತೆಗಳಗೊಳಪಟ್ಟು ಅವರ ಹಿತದೃಷ್ಠಿಯಿಂದ ಕಾರ್ಯನಿರ್ವಹಿಸುವುದು.
- ತಾನು ಸ್ವತಃ ವೃತ್ತಿಪರ, ಸಭ್ಯ ಮತ್ತು ಗೌರವಯುತ ರೀತಿಯಲ್ಲಿ ನಡೆದುಕೊಳ್ಳುವುದು.
- ನಿಗಮಕ್ಕೆ ಅನ್ವಯಿಸುವ ಎಲ್ಲಾ ಕಾನೂನುಗಳು, ನಿಯಮಗಳು ಮತ್ತು ನಿಭಂದನೆಗಳ ಅನುಸರಣೆ.
- ನಿಗಮದ ಖ್ಯಾತಿಯನ್ನು ವೃದ್ದಿಸುವ ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ನಡೆದುಕೊಳ್ಳುವುದು.
- ಕಾನೂನು ರೀತ್ಯಾ ಮತ್ತು ಅಧಿಕೃತವಾಗಿ ಅಗತ್ಯವಿರುವ ಸಂದರ್ಭಗಳಲ್ಲಿ ಹೊರತುಪಡಿಸಿ ಹಿರಿಯ ಅಧಿಕಾರಿಗಳು ಹುದ್ದೆಯ ಸೇವೆಯಲ್ಲಿರುವ ಸಂದರ್ಭದಲ್ಲಿ ಗಳಿಸಿದ ನಿಗಮಕ್ಕೆ ಸಂಬಂಧಿಸಿದ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವುದು.
- ತನ್ನ ಅಧಿಕಾರದಲ್ಲಿರುವಾಗ ದೊರಕಿದ ನಿಗಮಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ಬಳಸದೇ ಇರುವುದು.
3. ಕಾರ್ಪೂರೇಟ್ ವ್ಯವಹಾರ ಅವಕಾಶಗಳು :
- ಕಾರ್ಪೂರೇಟ್ ವ್ಯವಹಾರ ಅವಕಾಶವೆಂದರೆ ನಿಗಮವು ತನ್ನ ಹಿತದೃಷ್ಠಿಯಿಂದ ತಾನು ಆರ್ಥಿಕವಾಗಿ ಕೈಗೊಳ್ಳಬಹುದಾದ ವ್ಯವಹಾರ ಮಾರ್ಗ ಅಥವಾ ಪ್ರಸ್ತಾವಿತ ವಿಸ್ತರಣೆ ಅಥವಾ ವೈವಿಧ್ಯತೆಗಳು.
- ನಿಗಮದ ಹಿರಿಯ ಅಧಿಕಾರಿಗಳು ಇಂತಹ ಯಾವುದೇ ಅವಕಾಶದ ಬಗ್ಗೆ ತಿಳಿದರೆ ಅಥವಾ ಅದರಲ್ಲಿ ಭಾಗವಹಿಸಿದರೆ, ಅಂತಹ ಅವಕಾಶಗಳ ಕುರಿತು ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡುವುದು. ಈ ಅವಕಾಶದಲ್ಲಿ ನಿಗಮಕ್ಕೆ ಯಾವುದೇ ವಾಸ್ತವಿಕ ಅಥವಾ ನಿರೀಕ್ಷಿತ ಆಸಕ್ತಿ ಇಲ್ಲವೆಂಬುದರ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿರ್ಧರಿಸಿದಲ್ಲಿ ಮಾತ್ರ ನಿಗಮದ ಹಿರಿಯ ಅಧಿಕಾರಿ ಅಂತಹ ಅವಕಾಶಗಳಲ್ಲಿ ಪಾಲ್ಗೊಳ್ಳಬಹುದು. ಅದರೆ ನೇರವಾಗಿ ಅಥವಾ ಪರೋಕ್ಷವಾಗಿ ನಿಗಮದ ಸಂಪನ್ಮೂಲ / ಆಸ್ತಿ / ಮಾಹಿತಿಗಳನ್ನು ಬಳಸಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅಥವಾ ನಿಗಮದೊಂದಿಗೆ ಸ್ಪರ್ಧಿಸುವ ಅವಕಾಶಗಳಲ್ಲಿ ಭಾಗವಹಿಸುವಂತಿಲ್ಲ.
- ಹಿರಿಯ ಅಧಿಕಾರಿಗಳು ಲಭ್ಯವಾಗುವ ಅಂತಹ ಅವಕಾಶಗಳಲ್ಲಿ ಕಂಪನಿಯ ಹಿತಾಸಕ್ತಿಯನ್ನು ವೃದ್ಧಿಸಲು ಬದ್ದರಾಗಿರುತ್ತಾರೆ. ತಮ್ಮ ಹುದ್ದೆಯ ಪ್ರಭಾವವನ್ನು ಬಳಸಿ ಅಥವಾ ಕಂಪನಿಯ ಆಸ್ತಿ ಅಥವಾ ಮಾಹಿತಿಯನ್ನು ಉಪಯೋಗಿಸಿ, ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಬಾರದು ಹಾಗೂ ಕಂಪನಿಯು ನಡೆಸುತಿರುವ ವ್ಯವಹಾರಕ್ಕೆ ನೇರವಾಗಿ ಅಥವಾ ಪರ್ಯಯವಾಗಿ ಪ್ರತಿಸ್ಪರ್ಧೆ ನೀಡುವ ವ್ಯವಹಾರವನ್ನು ನಡೆಸಬಾರದು.
4. ಹಿತಾಸಕ್ತಿಯ ಸಂಘರ್ಷ :
- ನಿಗಮದ ಹಿತಾಸಕ್ತಿಯನ್ನು ವೃದ್ಧಿಸಲು ಮತ್ತು ನಿಗಮದ ಹಿತದೃಷ್ಠಿಯಿಂದ ಹೊರಗಿನ ಪ್ರಭಾವಕ್ಕೊಳಪಡದೆ ನಿರ್ಧಾರಗಳನ್ನು ಕೈಗೊಳ್ಳಲು ನಿಗಮದ ಹಿರಿಯ ಅಧಿಕಾರಿಗಳು ಅರ್ಪಣೆಯೊಂದಿಗೆ ಉತ್ತಮ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಅಪೇಕ್ಷಿಸಿದೆ.
- ಹಿತಾಸಕ್ತಿಯ ಸಂಘರ್ಷ ಈ ಕೆಳಗಿನ ಸಂದರ್ಭಗಳಲ್ಲಿ ಉಂಟಾಗುವುದು:
- ನಿಗಮದ ಒಬ್ಬ ಹಿರಿಯ ಅಧಿಕಾರಿ ನಿಷ್ಠೆಯಿಂದ ಹಾಗೂ ಪರಿಣಾಮಕಾರಿಯಾಗಿ ಯಾವುದೇ ಕ್ರಮ ಕೈಗೊಳ್ಳಲು ಅಡ್ಡಿಪಡಿಸುವುದು ಅಥವಾ ಅಡ್ಡಿಪಡಿಸಲು ಆಸಕ್ತಿ ತೋರಿಸಿದಾಗ;
- ನಿಗಮದ ಅಧಿಕಾರಿಯ ಹುದ್ದೆಯ ಪ್ರಭಾವವನ್ನು ಬಳಸಿ ತನ್ನ ಕುಟುಂಬದ ಯಾವುದೇ ಸದಸ್ಯರು ಯಾವುದೇ ಅನುಚಿತವಾದ ವೈಯಕ್ತಿಕ ಲಾಭವನ್ನು ಗಳಿಸಿದಲ್ಲಿ;
- ಯಾವುದೇ ಹೊರಗಿನ ವ್ಯವಹಾರದ ಚಟುವಟಿಕೆಯಿಂದ ವೈಯಕ್ತಿಕವಾಗಿ ತನ್ನ ಸಮಯ ಮತ್ತು ಸಾಮಥ್ರ್ಯವನ್ನು ವಿನಿಯೋಗಿಸುವಲ್ಲಿ ಮತ್ತು ನಿಗಮದ ಬಾಧ್ಯತೆಗಳನ್ನು ನಿರ್ವಹಿಸಲು ಭಂಗವಾದಲ್ಲಿ;
- ನಿಗಮ ಪ್ರಸಕ್ತ ಯಾವುದೇ ವ್ಯವಹಾರಿಕ ಸಂಬಂಧ ಹೊಂದಿರುವ ಕಂಪನಿ ಅಥವಾ ವ್ಯಕ್ತಿಯಿಂದ ಯಾವುದೇ ಸಮಂಜಸವಲ್ಲದ ಉಡುಗೊರೆ ಅಥವಾ ಅಧಿಕ ಮನರಂಜನೆ ಪಡೆದಲ್ಲಿ;
- ನಿಗಮದ ಯಾವುದೇ ಪೂರೈಕೆದಾರರು, ಗ್ರಾಹಕರು, ವ್ಯವಹಾರಿಕ ಪಾಲುದಾರರು ಅಥವಾ ನಿಗಮದ ಪ್ರತಿಸ್ಪರ್ಧಿ ಇವರುಗಳಲ್ಲಿ ಗಮನಾರ್ಹ ಮಾಲೀಕತ್ವ ಹೊಂದಿದ್ದಲ್ಲಿ;
- ನಿಗಮದ ಯಾವುದೇ ಪೂರೈಕೆದಾರರು, ಗ್ರಾಹಕರು, ವ್ಯಾವಹಾರಿಕ ಪಾಲುದಾರರು ಅಥವಾ ನಿಗಮದ ಪ್ರತಿಸ್ಪರ್ಧಿಗಳೊಂದಿಗೆ ಸಮಾಲೋಚಕರಾಗಿ ಅಥವಾ ಔದ್ಯೋಗಿಕ ಸಂಬಂಧ ಹೊಂದಿದ್ದಲ್ಲಿ;
- ನಿಗಮದ ಹಿರಿಯ ಅಧಿಕಾರಿಗಳು ನಿಗಮದೊಂದಿಗಿನ ಹಿತಾಸಕ್ತಿಯ ಸಂಘರ್ಷವನ್ನು ಅತಿಎಚ್ಚರದಿಂದ ತಡೆಯಬೇಕಿರುತ್ತದೆ. ಒಂದು ಪಕ್ಷ ನಿಗಮದೊಂದಿಗಿನ ಹಿತಾಸಕ್ತಿಯ ಸಂಘರ್ಷ ಉಂಟಾಗುವ ಸಾಧ್ಯತೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಯು ಸದರಿ ಹಿತಾಸಕ್ತಿಯ ವಿವರ ಮತ್ತು ಸಂದರ್ಭಗಳನ್ನು ಕೂಡಲೇ ವ್ಯವಸ್ಥಾಪಕ ನಿರ್ದೇಶಕರಿಗೆ ಬಹಿರಂಗಪಡಿಸುವುದು ಮತ್ತು ವ್ಯವಸ್ಥಾಪಕ ನಿರ್ದೇಶಕರಿಂದ ಲಿಖಿತ ಪೂರ್ವಾನುಮೋದನೆ ಪಡೆಯುವುದು.
5. ಉಡುಗೊರೆಗಳು:
ನಿಗಮದೊಂದಿಗೆ ವ್ಯವಹಾರ ಸಂಬಂಧವಿರುವ ಯಾವುದೇ ವ್ಯಕ್ತಿ, ಸಂಸ್ಥೆಗಳಿಂದ ನಿಗಮದ ಹಿರಿಯ ಅಧಿಕಾರಿಗಳಾಗಲಿ ಅಥವಾ ಸದರಿ ಅಧಿಕಾರಿಗಳ ಕುಟುಂಬ ಸದಸ್ಯರುಗಳಾಗಲಿ ನಿಗಮದ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ.
6. ಪ್ರಾಮಾಣಿಕತೆ ಮತ್ತು ನೈತಿಕ ನಡೆ:
ನಿಗಮದ ಹಿರಿಯ ಅಧಿಕಾರಿಗಳು ನಿಗಮದ ಆವರಣದಲ್ಲಷ್ಟೆ ಅಲ್ಲದೇ ನಿಗಮ ಪ್ರಾಯೋಜಿತ ವ್ಯವಹಾರ, ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ತಮ್ಮ ಅತ್ಯುನ್ನತ ಮಟ್ಟದ ವೈಯಕ್ತಿಕ ಹಾಗೂ ವೃತ್ತಿಪರ ಸಮಗ್ರತೆ, ಪ್ರಾಮಾಣಿಕತೆ ಮತ್ತು ನೈತಿಕತೆಯಿಂದ ನಡೆದುಕೊಳ್ಳುವುದು. ಸದರಿ ಅಧಿಕಾರಿಗಳು ಮೋಸ ಮತ್ತು ವಂಚನೆ ರಹಿತರಾಗಿ ನಡೆದುಕೊಳ್ಳುವುದು. ಸದರಿ ಅಧಿಕಾರಿಗಳ ನಡೆ ಅತ್ಯುತ್ತಮ ವೃತ್ತಿಪರ ನಡೆಗೆ ಅನುಗುಣವಾಗಿರಬೇಕು.
7. ಗೌಪ್ಯತೆ:
ಬಹಿರಂಗಪಡಿಸುವಿಕೆ ಅಧಿಕೃತಗೊಳಿಸಿದ ಸಂದರ್ಭಗಳಲ್ಲಿ ಮತ್ತು ಕಾನೂನುಬದ್ಧವಾಗಿ ಕಡ್ಡಾಯವಾಗಿ ಬಹಿರಂಗಪಡಿಸುವ ಸನ್ನಿವೇಶಗಳಲ್ಲಿ ಹೊರತುಪಡಿಸಿ, ನಿಗಮದ ರಹಸ್ಯ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ನಿಗಮದ ಯಾವುದೇ ಗ್ರಾಹಕರು, ಪೂರೈಕೆದಾರರು ಅಥವಾ ವ್ಯಾವಹಾರಿಕ ಪಾಲುದಾರರ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವುದು ನಿಗಮದ ಹಿರಿಯ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಸಾರ್ವಜನಿಕವಾಗಿ ಲಭ್ಯವಿಲ್ಲದ ಎಲ್ಲಾ ಮಾಹಿತಿಗಳು (ಖಾಸಗಿ, ಮಾಲೀಕತ್ವ ಮತ್ತು ಇತರೆ) ಅಂದರೆ ಸದರಿ ಮಾಹಿತಿಯನ್ನು ಪ್ರತಿಸ್ಪರ್ದಿಯ ಬಳಕೆಯಿಂದ ನಿಗಮಕ್ಕೆ ಮತ್ತು ಅದರ ಸಹವರ್ತಿಗಳಿಗೆ ಹಾನಿಕಾರಕ ಪರಿಣಾಮ ಉಂಟಾಗುವ ಎಲ್ಲಾ ಮಾಹಿತಿಗಳು ರಹಸ್ಯ ಮಾಹಿತಿಗಳಾಗಿರುತ್ತವೆ. ರಹಸ್ಯ ಮಾಹಿತಿಯ ಬಳಕೆಯಿಂದ ಸ್ವಂತ ಅನುಕೂಲ ಅಥವಾ ಲಾಭ ಗಳಿಸುವಿಕೆಯನ್ನು ಸಹ ನಿಷೇಧಿಸಲಾಗಿದೆ.
8.ನ್ಯಾಯೋಚಿತ ವ್ಯವಹಾರ:
ನಿಗಮದ ಹಿರಿಯ ಅಧಿಕಾರಿಗಳು ನಿಗಮದ ಗ್ರಾಹಕರು, ಪೂರೈಕೆದಾರರು, ಪ್ರತಿಸ್ಪರ್ಧಿಗಳು ಮತ್ತು ನಿಗಮದ ನೌಕರರೊಂದಿಗೆ ನ್ಯಾಯೋಚಿತವಾಗಿ ನಡೆದುಕೊಳ್ಳುವುದು. ಇವರು ಗೌಪ್ಯತೆ ಬೇಧಿಸಿ ಆಸ್ತಿ ಅಥವಾ ವ್ಯವಹಾರಿಕ ರಹಸ್ಯ ಮಾಹಿತಿ ಪಡೆಯುವಿಕೆ, ವಸ್ತು ಸ್ಥಿತಿಗಳ ಮಿಥ್ಯ ನಿರೂಪಣೆ ಮತ್ತು ಇತರ ರೀತಿಯ ಕೈವಾಡಗಳಿಂದ ನ್ಯಾಯೋಚಿತವಲ್ಲದ ಲಾಭ /ಪ್ರಯೋಜನ ಪಡೆಯಬಾರದು.
9.ನಿಗಮದ ಆಸ್ತಿಗಳ ಸಂರಕ್ಷಣೆ ಮತ್ತು ಸರಿಯಾದ ಉಪಯೋಗ:
ಎಲ್ಲಾ ಹಿರಿಯ ಅಧಿಕಾರಿಗಳು ನಿಗಮದ ಸ್ವತ್ತು ಮತ್ತು ಆಸ್ತಿಗಳ ಸಮರ್ಥ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು. ನಿಗಮದ ಲಾಭಾಂಶದ ಮೇಲೆ ಪರಿಣಾಮ ಬೀರುವ ನಿಗಮದ ಯಾವುದೇ ಆಸ್ತಿ / ಸ್ವತ್ತುಗಳ ಕಳ್ಳತನ, ಅಸಡ್ಡೆ, ಹಾಳುಮಾಡುವುದು ನಿಷೇದವಿದ್ದು, ನಿಗಮದ ಆಸ್ತಿಗಳನ್ನು ಕಾನೂನುಬದ್ಧ / ನ್ಯಾಯೋಚಿತ ವ್ಯವಹಾರಗಳಿಗೆ ಮಾತ್ರ ಬಳಸುವುದು.
10. ಕಾನೂನು, ನಿಯಮಗಳು ಮತ್ತು ನಿಬಂಧನೆಗಳ ಅನುಸರಣೆ:
ನಿಗಮದ ಹಿರಿಯ ಅಧಿಕಾರಿಗಳು ನಿಗಮಕ್ಕೆ ಅನ್ವಯಿಸುವ ಎಲ್ಲಾ ಕಾನೂನು, ನಿಯಮಗಳು ಮತ್ತು ನಿಬಂಧನೆಗಳನ್ನು ಅನುಪಾಲಿಸುವುದು. ಯಾವುದೇ ವ್ಯವಹಾರದಲ್ಲಿ ನಿಗಮದ ಆಸ್ತಿಪತ್ರ (ಸೆಕ್ಯೂರಿಟಿ)ಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಗಮದ ಕಂಪ್ಲೆಯನ್ಸ್ ಅಧಿಕಾರಿಯ ಪೂರ್ವಾನುಮತಿ ಇಲ್ಲದೆ ಬಳಸಬಾರದು. ನಿಗಮದ ಯಾವುದೇ ಹಿರಿಯ ಅಧಿಕಾರಿಯು ತನ್ನ ಕಾನೂನು ನಿಯಮಗಳ ಜ್ಞಾನದ ಅಭಾವ ಅಥವಾ ಅನಿಶ್ಚಿತತೆಯಿಂದ ನಿಗಮಕ್ಕೆ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಪೂರ್ವದಲ್ಲಿ ನಿಗಮದ ಕಾನೂನು ಶಾಖೆಯನ್ನು ಸಂಪರ್ಕಿಸುವುದು.
11. ನೀತಿ ಸಂಹಿತೆಯ ಅನುಸರಣೆ:
ನಿಗಮದ ಯಾವುದೆ ಹಿರಿಯ ಅಧಿಕಾರಿಯು ಅನ್ವಯವಾಗುವ ಯಾವುದೇ ಕಾನೂನು, ನಿಯಮ ಮತ್ತು ನಿಬಂಧನೆಗಳನ್ನು ಅಥವಾ ನಿಗಮದ ನೀತಿ ಸಂಹಿತೆ ತನಗೆ ಗೋಚರಿಸಿದ ಉಲ್ಲಂಘನೆ ಅಥವಾ ಶಂಕಿತ ಉಲ್ಲಂಘನೆ ಸಂದರ್ಭಗಳಲ್ಲಿ ಕೂಡಲೇ ವ್ಯವಸ್ಥಾಪಕ ನಿರ್ದೇಶಕರಲ್ಲಿ ವರದೀಕರಿಸುವುದು. ಅಂತಹ ವ್ಯಕ್ತಿಯು ತನಗೆ ಸಾಧ್ಯವಾದ ಹಾಗೂ ಲಭ್ಯವಿರುವ ಎಲ್ಲಾ ಶಂಕಿತ ಉಲ್ಲಂಘನೆ ವಿವರಗಳನ್ನು ನೀಡುವುದು. ನಿಗಮದ ಆಸ್ತಿ, ಆರ್ಥಿಕ ಸಮಗ್ರತೆ ಮತ್ತು ಖ್ಯಾತಿಯ ರಕ್ಷಣೆಗಾಗಿ ಹಾಗೂ ನಿಗಮದ ಹಿತಾಸಕ್ತಿಗೆ ಧಕ್ಕೆ ಬರುವ ಎಲ್ಲಾ ಸಮಸ್ಯಗಳಿಗೆ ಪ್ರಾಧಾನ್ಯತೆ ಕೊಟ್ಟು ಅವುಗಳನ್ನು ಬಗೆಹರಿಸುವುದು. ವರದೀಕರಿಸಿದ ಎಲ್ಲಾ ಉಲ್ಲಂಘನೆಗಳನ್ನು ಸಮರ್ಪಕವಾದ ತನಿಖೆಗೆ ಒಳಪಡಿಸುವುದು. ಈ ನೀತಿ ಸಂಹಿತೆಯ ಉಲ್ಲಂಘನೆಯು ಶಿಸ್ತಿನ ಕ್ರಮಕ್ಕೆ ಗುರಿಯಾಗುವುದಲ್ಲದೆ ಉಲ್ಲಂಘಿತ ಹಿರಿಯ ಅಧಿಕಾರಿಯ ಸೇವೆಯನ್ನು ಮುಕ್ತಾಯಗೊಳಿಸಬಹುದಾಗಿರುತ್ತದೆ. ನೀತಿ ಸಂಹಿತೆ ಉಲ್ಲಂಘನೆಯ ವಿರುದ್ಧ ಸಮರ್ಪಕ ಕ್ರಮ ಕೈಗೊಳ್ಳುವ ನಿರ್ಧಾರ ನಿಗಮದ ವ್ಯವಸ್ಥಾಪಕ ನಿರ್ದೇಶಕರದ್ದಾಗಿರುತ್ತದೆ.
12. ನೀತಿ ಸಂಹಿತೆಯ ವ್ಯಾಖ್ಯಾನ :
ಈ ನೀತಿ ಸಂಹಿತೆ ಮತ್ತು ವ್ಯವಹಾರಿಕ ನಡತೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆ ಅಥವಾ ವ್ಯಾಖ್ಯಾನಗಳನ್ನು ವ್ಯವಸ್ಥಾಪಕ ನಿರ್ದೇಶಕರು ನಿರ್ವಹಿಸುವರು. ನಿಗಮದ ಯಾವುದೇ ಹಿರಿಯ ಅಧಿಕಾರಿಗೆ ಈ ನೀತಿ ಸಂಹಿತೆಯ ಅನುಸರಣೆಯಿಂದ ವಿನಾಯಿತಿಯನ್ನು ನೀಡುವ ಅಧಿಕಾರ ವ್ಯವಸ್ಥಾಪಕ ನಿರ್ದೇಶಕರಿಗಿರುತ್ತದೆ. ಈ ನೀತಿ ಸಂಹಿತೆಯ ವಿನಾಯಿತಿಯನ್ನು ಕೋರುವ ವ್ಯಕ್ತಿಯು ಎಲ್ಲಾ ವಿವರಗಳನ್ನು ಮತ್ತು ಸಂದರ್ಭಗಳನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಬಹಿರಂಗಪಡಿಸುವುದು.