ಕೃಷ್ಣಾ ಮೇಲ್ದಂಡೆ ಯೋಜನೆ

ಕೃಷ್ಣಾ ಮೇಲ್ದಂಡೆ ಯೋಜನೆಯು ಕೃಷ್ಣಾ ನದಿಯ ಉದ್ದಗಲಕ್ಕೆ ಎರಡು ಆಣೆಕಟ್ಟುಗಳು ಮತ್ತು ಕಾಲುವೆಗಳ ಜಾಲ ಹೊಂದಿರುತ್ತದೆ. ಘಟಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ಆಲಮಟ್ಟಿ ಜಲಾಶಯವು ಪ್ರಮುಖ ಶೇಖರಣೆ ಜಲಾಶಯವಾಗಿದೆ. ಮಲಪ್ರಭಾ ನದಿ ಮತ್ತು ಕೃಷ್ಣಾ ನದಿಗಳ ಸಂಗಮದಿಂದ ಕೆಲವು ಕಿ.ಮಿ ಕೆಳದಿಕ್ಕಿನಲ್ಲಿ ನಾರಾಯಣಪುರದಲ್ಲಿ ಸ್ಥಿತವಿರುವ ಕೆಳಭಾಗದ ಅಣೆಕಟ್ಟು, ನಾರಾಯಣಪುರ ಆಣೆಕಟ್ಟು, ದಿಕ್ಪರಿವರ್ತನಾ ಆಣೆಕಟ್ಟಾಗಿ ಕಾರ್ಯನಿರ್ವಹಿಸುವುದು. ಈ ಯೋಜನೆಯನ್ನು ವಿವಿಧ ಹಂತಗಳು ಮತ್ತು ಘಟಕಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಯೋಜನೆಯ ಹಂತ-1, 119 ಟಿಎಂಸಿ ನೀರನ್ನು ಉಪಯೋಗಿಸಿ 4,25,000 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಆಲೋಚಿಸಿದೆ ಹಾಗೂ ಹಂತ-2ರಲ್ಲಿ, 54 ಟಿಎಂಸಿ ನೀರನ್ನು ಬಳಸಿ 1,97,120 ಹೆಕ್ಟೇರುಗಳ ಪ್ರದೇಶವನ್ನು ನೀರಾವರಿಯಾಗಿ ಪರಿವರ್ತಿಸಲು ಯೋಜಿಸಲಾಗಿದೆ. ಉತ್ತರ ಕರ್ನಾಟಕದ ಬರ ಪೀಡಿತ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳಾದ ಗುಲಬರ್ಗಾ, ಯಾದಗಿರ್, ರಾಯಚೂರು, ಬಿಜಾಪುರ ಮತ್ತು ಬಾಗಲಕೋಟೆ, ಈ ಸ್ಥಳಗಳಿಗೆ ಕೃಮೇಯೋ ಹಂತ 1 ಮತ್ತು 2ರ ಕೆಳಗೆ ಒಟ್ಟು 173 ಟಿಎಂಸಿ ನೀರಿನ ಬಳಕೆಯೊಂದಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ, ಕೃಮೇಯೋ ಹಂತ-1 ಮತ್ತು 2ರ ಯೋಜನೆ ಬಹಳಷ್ಟು ಪೂರ್ಣಗೊಂಡಿದ್ದು 6.08 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನವನ್ನು 30-12-2010ರಂದು ಆದೇಶ ಪ್ರಕಟಿಸಿತ್ತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ 65% ಹಂಚಿಕೆಯು ಈ ಕೆಳಗಿನಂತಿದೆ:

1

ಮಹಾರಾಷ್ಟ್ರ

81 ಟಿ.ಎಂ.ಸಿ.

2

ಕರ್ನಾಟಕ

177 ಟಿ.ಎಂ.ಸಿ.

3

ಆಂಧ್ರ ಪ್ರದೇಶ

190 ಟಿ.ಎಂ.ಸಿ.

ಕೃ.ಜ.ವಿ.ನ್ಯಾ.-2, ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿ.ಎಂ.ಸಿ.ಯಲ್ಲಿ, 130.90 ಟಿ.ಎಂ.ಸಿ.ಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಹಂಚಿಕೆ ಮಾಡಿಲಾಗಿದೆ.

 

 


ಇತ್ತೀಚಿನ ನವೀಕರಣ​ : 29-09-2020 04:24 PM
ಅನುಮೋದಕರು: Admin

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 4027
 • ಇತ್ತೀಚಿನ ನವೀಕರಣ : 19-04-2021 10:02 AM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ