ಅಭಿಪ್ರಾಯ / ಸಲಹೆಗಳು

ನಿಗಮ

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃ.ಭಾ.ಜ.ನಿ.ನಿ.) ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (ಕೃ.ಮೇ.ಯೋ.) ಕಾರ್ಯಗತಗೊಳಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994ರ ಆಗಸ್ಟ್ 19ರಂದು ನಿಗಮಗಳ ಕಾಯಿದೆ 1956ರ ಅನುಸಾರ ಸ್ಥಾಪಿಸಲಾಗಿದೆ.

 

ಈ ನಿಗಮವು ಕೃ.ಮೇ.ಯೋ. ವ್ಯಾಪ್ತಿಯ ಎಲ್ಲಾ ನೀರಾವರಿ ಯೋಜನೆಗಳ ರಚನಾಕ್ರಮ, ತನಿಖೆ, ಅಂದಾಜು, ನೆರವೇರಿಕೆ, ಕಾಯಾಚರಣೆ ಮತ್ತು ನಿರ್ವಹಣೆಗೆ ಹೊಣೆಯಾಗಿರುತ್ತದೆ. ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಮತ್ತು ಯು.ಕೆ.ಪಿ.ಯ ನಿರ್ವಹಣೆ ಕೂಡ ನಿಗಮದ ಹೊಣೆಯಾಗಿರುತ್ತದೆ. ಈ ಯೋಜನೆಯಿಂದಾಗಿ ಬಾಧಿತರಾದ ಜನರ ಪುನರ್ ವಸತಿಯ ಹೊಣೆಯು ನಿಗಮದ ಜವಾಬ್ದಾರಿಯಾಗಿದೆ. ನಿಗಮವು ನೀರಿನ ಮಾರಾಟ ಮಾಡುವ ಮತ್ತು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪಟ್ಟಣಗಳು, ನಗರಸಭೆ, ಪುರಸಭೆ ಮತ್ತು ಕೈಗಾರಿಕೋದ್ಯಮಗಳಿಂದ, ವ್ಯಕ್ತಿಗಳಿಂದ, ರೈತರ ಗುಂಪುಗಳಿಂದ ನೀರಿನ ಕರ ವಸೂಲು ಮಾಡುವ ಅಧಿಕಾರ ಹೊಂದಿರುತ್ತದೆ.

 

ಕರ್ನಾಟಕದ ಹಲವು ಪ್ರಧೇಶಗಳು ಮಳೆಯ ಕೊರತೆ ಲಕ್ಷಣವುಳ್ಳ ಪಶ್ಚಿಮ ಘಟ್ಟಗಳ ಬರ ಪೀಡಿತ ನೆರಳಿನಲ್ಲಿದೆ. ಈಶಾನ್ಯ ಕರ್ನಾಟಕದ ಬರ ಪೀಡಿತ ಭಾಗಗಳಾದ, ಬೆಂಗಳೂರಿನಿಂದ ಸುಮಾರು 456 ಕಿ.ಮಿ. ದೂರದಲ್ಲಿರುವ ಗುಲಬರ್ಗಾ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಯು.ಕೆ.ಪಿ. ಮತ್ತಿತರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದು ಕೃಷ್ಣಾ ಮತ್ತು ಭೀಮಾ ನದಿಗಳ ನಡುವಿದ್ದು ಒಂದು ತ್ರಿಕೋನಾಕೃತಿಯ ಪ್ರದೇಶವನ್ನು ಆವರಿಸುತ್ತದೆ. ಈ ಪ್ರದೇಶದಲ್ಲಿರುವ ಜನರು ತಮ್ಮ ಜೀವನೋಪಾಯಕ್ಕಾಗಿ ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿರುವರು. ಈ ಪ್ರದೇಶವು ಮಳೆಯ ಅಭಾವ ಹೊರತಾಗಿಯೂ, ಬಹಳ ಫಲವತ್ತಾದ ಭೂಮಿಯನ್ನು ಹೊಂದಿರುವುದು. ಈ ಪ್ರದೇಶವನ್ನು ನೀರಾವರಿ ಸೌಲಭ್ಯ ಕಲ್ಪಿಸಿರುವುದರಿಂದ ಈ ಪ್ರದೇಶದ ಆರ್ಥಿಕ ಚಿತ್ರಣವು ಬದಲಾಗುವುದು. ಇದು ನೇರವಾಗಿ ಈ ಪ್ರದೇಶದ ಅಭಿವೃದ್ಧಿಗೆ ಮತ್ತು ಪರೋಕ್ಷವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ಮಟ್ಟಿಗೆ ಸಹಕಾರಿಯಾಗುವುದು.

 

ಇತ್ತೀಚಿನ ನವೀಕರಣ​ : 29-09-2020 02:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080