ಅಭಿಪ್ರಾಯ / ಸಲಹೆಗಳು

ಸಂಕ್ಷಿಪ್ತ ಇತಿಹಾಸ ಮತ್ತು ನಿಗಮದ ಹಿನ್ನೆಲೆ

ಕೃಷ್ಣಾ ನದಿಯು ಪರ್ಯಾಯದ್ವೀಪದ ಭಾರತದಲ್ಲಿ ಅತಿ ದೊಡ್ಡ ನದಿಗಳಲ್ಲಿ ಎರಡನೆಯದು ಹಾಗೂ ಇದು ಪಶ್ಚಿಮ ಘಟ್ಟಗಳ ಮಹದೇವ ವ್ಯಾಪ್ತಿಯಲ್ಲಿ ಜನ್ಮತಾಳುತ್ತದೆ. ಇದು ಮಹಾರಾಷ್ಟ್ರದ ಮಹಾಬಲೇಶ್ವರದ ಹತ್ತಿರ ಪಶ್ಚಿಮ ಘಟ್ಟಗಳಲ್ಲಿ ಸಮುದ್ರ ಮಟ್ಟದ ಮೇಲೆ 1,336.49 ಮೀ. ಎತ್ತರದಲ್ಲಿ ಜನ್ಮ ತಾಳುತ್ತದೆ ಮತ್ತು ಬಂಗಾಳದ ಕೊಲ್ಲಿಯ ಪಾಲಾಗುವ ಮುನ್ನ ಪರ್ಯಾಯದ್ವೀಪದುದ್ದಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 1,392 ಕಿ.ಮಿ.ಗಳಷ್ಟು ಹರಿಯುತ್ತದೆ. ತನ್ನ 304 ಕಿ.ಮಿ.ಗೆ ಇದು ಕರ್ನಾಟಕ ರಾಜ್ಯವನ್ನು ಪ್ರವೇಶಿಸುತ್ತದೆ ಹಾಗೂ 480 ಕಿ.ಮಿ.ಗಳಷ್ಟು ರಾಜ್ಯದ ಮೂಲಕ ಹಾದುಹೋಗಿ, ಕೊನೆಗೆ ಆಂಧ್ರ ಪ್ರದೇಶದ ಬಾಪಟ್ಲಾ ಎಂಬ ಸ್ಥಳದ ಹತ್ತಿರ ಬಂಗಾಳ ಕೊಲ್ಲಿಗೆ ಧುಮುಕುತ್ತದೆ. ಈ ನದಿಯು ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹರಿಯುವ, ಅಂತರರಾಜ್ಯ ನದಿಯಾಗಿರುತ್ತದೆ. ನದಿಯ ಜಲಾನಯನ ಪ್ರದೇಶವು 2.57 ಲಕ್ಷ ಚದರ ಕಿ.ಮಿ ಆಗಿದ್ದು, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಅನುಕ್ರಮವಾಗಿ 68,800 ಚದರ ಕಿ.ಮಿ (26.8%), 1,12,600 ಚದರ ಕಿ.ಮಿ (43.8%) ಮತ್ತು 75,600 ಚದರ ಕಿ.ಮಿ (29.4%) ಪ್ರಮಾಣದಲ್ಲಿರುತ್ತದೆ. ಮೂಲತ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಹಿಂದಿನ ಹೈದರಾಬಾದ್ ರಾಜ್ಯವು ಕೆಳದಂಡೆ ಕೃಷ್ಣಾ ಯೋಜನೆಯೊಡನೆ (ಈಗ ನಾಗಾರ್ಜುನಸಾಗರ ಯೋಜನೆ ಎಂದು ಕರೆಯಲ್ಪಡುತ್ತದೆ) ಪ್ರಾರಂಭಿಸಲಾಯಿತು. ಆರಂಭದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಆಗಿರಲಿಲ್ಲ ಏಕೆಂದರೆ ಮುಳುಗುವಿಕೆಯು ಬಹುಮಟ್ಟಿಗೆ ಬಿಜಾಪುರ ಜಿಲ್ಲೆಯಲ್ಲಿತ್ತು, ಆ ಸಮಯದಲ್ಲಿ ಬಿಜಾಪುರವು ಮೈಸೂರು ರಾಜ್ಯದ (ಕರ್ನಾಟಕ) ಭಾಗವಾಗಿರಲಿಲ್ಲ. ರಾಜ್ಯಗಳ ಪುನರ್ಸಂಘಟನೆಯ ನಂತರ ಯೋಜನೆಯ ವ್ಯಾಪ್ತಿ ಬದಲಾವಣೆ ಮಾಡಿ ಎರಡು ಸಂಗ್ರಹಣಾ ಜಲಾಶಯಗಳು ಸೇರಿಸಲಾಯಿತು.

 

1973ಯಲ್ಲಿ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ (ಕೃ.ಜ.ವಿ.ನ್ಯಾ) ಕೃಷ್ಣಾ ನದಿ ನೀರನ್ನು ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹಂಚುವ ಬಗ್ಗೆ ತೀರ್ಪು ಪ್ರಕಟಿಸಿತ್ತು. ಕೃ.ಜ.ವಿ.ನ್ಯಾ.-1, ಡಿಸೆಂಬರ್ 24, 1973ರ ತನ್ನ ಅಂತಿಮ ತೀರ್ಪಿನಲ್ಲಿ ಕೃಷ್ಣಾ ನೀರಿನ 2060 ಟಿ.ಎಂ.ಸಿ.ಯ 75% ಹರಿಯುವಿಕೆಗಳನ್ನು ಮೂರು ನದಿತೀರದ ರಾಜ್ಯಗಳಿಗೆ ಹಂಚಲಾಗಿದೆ ಹಾಗೂ ಕರ್ನಾಟಕ ರಾಜ್ಯದ ಪಾಲು ಒಟ್ಟಾರೆ 734 ಸಾವಿರ ದಶಲಕ್ಷ ಘನ ಅಡಿ (ಟಿ.ಎಂ.ಸಿ.) ಯಷ್ಟು ಆಗುತ್ತದೆ. ದಿನಾಂಕ ಮೇ 27, 1976ರ ನ್ಯಾಯಮಂಡಳಿಯ ಮುಂದಿನ ವರದಿಯು, ಕಾಯ್ದೆಯ ಪರಿಚ್ಛೇದ 5(3)ರ ಅಡಿಯಲ್ಲಿ ವಿವಿಧ ರಾಜ್ಯಗಳು ಮಾಡಿದ ಉಲ್ಲೇಖಗಳ ಆಧಾರದ ಮೇಲೆ ಅಂತಿಮ ಪರಿಪೂರ್ಣ ಆದೇಶವು ಕೂಡ ಹೊಂದಿತ್ತು. ಕೇಂದ್ರ ಸರಕಾರವು ಮೇಲ್ಕಂಡ ಆದೇಶವನ್ನು ನ್ಯಾಯಮಂಡಳಿಯ ಆದೇಶವೆಂದು ವ್ಯಾಖ್ಯಾನಿಸಿತು ಮತ್ತು ಅಂತೆಯೇ ಅದನ್ನು ಅಸಾಮಾನ್ಯ ಗೆಜೆಟ್ ದಿನಾಂಕ ಮೇ 31, 1976ರಲ್ಲಿ ಪ್ರಕಟಗೊಳಿಸಿತು ಹಾಗೂ ಇಂಥ ಪ್ರಕಟಣೆಯ ಮೇರೆಗೆ ಈ ಅಂತಿಮ ತೀರ್ಪು ಶಾಸನಬದ್ಧವಾಗಿ ಅಂತಿಮವಾಗಿದೆ ಮತ್ತು ವಿವಾದದ ಸಂದರ್ಭದಲ್ಲಿ ಇರುವ ಎಲ್ಲಾ ವ್ಯಕ್ತಿಗಳ ಮೇಲೆ ಬದ್ಧವಾಗಿರುತ್ತದೆ. ಈ ತೀರ್ಪಿನ ಅನುಷ್ಠಾನಕ್ಕಾಗಿ, ಕರ್ನಾಟಕ ಸರಕಾರವು ಹಲವು ಯೋಜನೆಗಳನ್ನೊಳಗೊಂಡ ಒಂದು ಯೋಜನೆಯನ್ನು(ಮಾಸ್ಟರ್ ಪ್ಲಾನ್) ರೂಪಿಸಿತು. ಕೃಷ್ಣಾ ಮೇಲ್ದಂಡೆ ಯೋಜನೆಯು ಇವುಗಳಲ್ಲಿ ಒಂದು. ಇದರಲ್ಲಿ 173 ಟಿ.ಎಂ.ಸಿ. ನೀರಿನ ಬಳಕೆಯನ್ನು ಪ್ರಸ್ತಾಪಿಸಲಾಯಿತು. ಕನಿಷ್ಠ ಸಮಯದಲ್ಲಿ ಗರಿಷ್ಠ ಲಾಭ ಪಡೆಯುವ ಸಲುವಾಗಿ, 119 ಟಿ.ಎಂ.ಸಿ. ನೀರನ್ನು ಹಂತ 1ರಲ್ಲಿ ಮತ್ತು 54 ಟಿ.ಎಂ.ಸಿ. ಹಂತ 2ರಲ್ಲಿ ಬಳಸಲು ಈ ಯೋಜನೆಯನ್ನು ಹಲವು ಹಂತಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.

 

ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನವನ್ನು 30-12-2010ರಂದು ಆದೇಶ ಪ್ರಕಟಿಸಿತ್ತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ 65% ಹಂಚಿಕೆಯು ಈ ಕೆಳಗಿನಂತಿದೆ:

1

ಮಹಾರಾಷ್ಟ್ರ

81 ಟಿ.ಎಂ.ಸಿ.

2

ಕರ್ನಾಟಕ

177 ಟಿ.ಎಂ.ಸಿ.

3

ಆಂಧ್ರ ಪ್ರದೇಶ

190 ಟಿ.ಎಂ.ಸಿ.

ಕೃ.ಜ.ವಿ.ನ್ಯಾ.-2, ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವ 177 ಟಿ.ಎಂ.ಸಿ.ಯಲ್ಲಿ, 130.90 ಟಿ.ಎಂ.ಸಿ.ಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಹಂಚಿಕೆ ಮಾಡಿಲಾಗಿದೆ.

ಇತ್ತೀಚಿನ ನವೀಕರಣ​ : 29-09-2020 02:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080